ರಾಯಚೂರು

ಹಾಡುಹಗಲೇ ವ್ಯಾಪಾರಸ್ಥನ ಕೊಲೆ: ಅಸುರಕ್ಷಿತ ವಾತಾವರಣದ ವಿರುದ್ಧ ಮೂರು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ರಾಯಚೂರು: ನಗರದ ಜನನಿಬಿಡ ಪ್ರದೇಶದಲ್ಲಿ ಹಾಡುಹಗಲೇ ಅಮಾಯಕ ವ್ಯಾಪಾರಸ್ಥನನ್ನು ಕೊಲೆ ಮಾಡಿರುವ ಘಟನೆ ಖಂಡಿಸಿ, ನಗರದಲ್ಲಿ ಹೆಚ್ಚುತ್ತಿರುವ ಅಸುರಕ್ಷತೆ ಹಾಗೂ ಸಾರ್ವಜನಿಕರಲ್ಲಿ ಮೂಡಿರುವ ಭಯದ ವಾತಾವರಣ ನಿವಾರಿಸಲು ಆಗ್ರಹಿಸಿ ಮೂರು ಕನ್ನಡಪರ ಸಂಘಟನೆಗಳು ಸಂಘಟನೆಗಳಿಂದ ಜಂಟಿಯಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದಲ್ಲಿ ಜನಸಂದಣಿಯ ನಡುವೆಯೇ ಯುವಕನನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸಾಲ ನೀಡದ ಕ್ಷುಲ್ಲಕ ವಿಚಾರಕ್ಕೆ ಕುಟುಂಬದ ಆಧಾರಸ್ತಂಭವಾಗಿದ್ದ ಯುವಕನನ್ನು ಹತ್ಯೆ ಮಾಡಿರುವುದು ಖಂಡನೀಯ. ಇಂತಹ ಘಟನೆಗಳು ಮರುಕಳಿಸುತ್ತಿರುವುದು ನಗರದ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ನಗರದ ಯುವಕರು ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗುತ್ತಿರುವ ಬಗ್ಗೆ ಅನುಮಾನಗಳಿದ್ದು, ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ, ಬಂಧನಕ್ಕೆ ಮಾತ್ರ ಸೀಮಿತವಾಗದೆ ಇಂತಹ ಕೃತ್ಯಗಳಿಗೆ ಕಾರಣವಾಗುವ ಮಾದಕ ವಸ್ತುಗಳ ಜಾಲವನ್ನು ಪತ್ತೆಹಚ್ಚಿ ನಿಯಂತ್ರಿಸಬೇಕು. ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿಶೇಷ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಈ ಹಿಂದೆ ನಡೆದಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳ ಬೆನ್ನಲ್ಲೇ ಇದೀಗ ಹಾಡುಹಗಲೇ ವ್ಯಾಪಾರಸ್ಥನ ಕೊಲೆ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ತುರ್ತು ಸಭೆ ನಡೆಸಿ, ಸಮಗ್ರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಮಿತ್ರ ಕೂಟದ ಮುಖಂಡರು ಜಂಟಿಯಾಗಿ ಈ ಮನವಿ ಸಲ್ಲಿಸಿ, ನಗರ ಮತ್ತು ಜಿಲ್ಲೆಯ ಜನರಲ್ಲಿ ಭದ್ರತೆಯ ಭಾವನೆ ಮೂಡಿಸಲು ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣದ) ಜಿಲ್ಲಾಧ್ಯಕ್ಷ ಅಶೋಕಕುಮಾರ ಸಿ.ಕೆ. ಜೈನ್, ಕೆ. ಪ್ರಮುಖರಾದ ಕಿಶನ್ ರಾವ್, ಮಲ್ಲಿಕಾರ್ಜುನ, ಅಜಿಜ್, ಅಸಿಫ್, ನಾಗರಾಜ ಮಡಿವಾಳ, ನಾಸಿರ್, ಮಹಮ್ಮದ್ ಇಸಾಕ್, ಭೀಮೇಶ, ತಾಜುದ್ದೀನ್, ಸಮೀರ್, ಬಸವರಾಜ (ಸ್ವಾತಿ), ಯಶೋಧರ ರೆಡ್ಡಿ, ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಹೆಚ್.ಹೆಚ್. ಮ್ಯಾದಾರ, ಬಶೀರ ಅಹ್ಮದ ಹೊಸಮನಿ, ರಾಮಲಿಂಗಪ್ಪ ಕುನ್ನೆ, ರಫೀಕ್ ಅಹ್ಮದ್, ರಾಮಣ್ಣ ಮ್ಯಾದಾರ, ರುದ್ರಯ್ಯ ಗುಣ್ಣಾರಿ, ಮಹೇಂದ್ರಸಿಂಗ್, ವೀರೇಶಬಾಬು, ಹನುಮಂತ ಅಲ್ಲೂರು, ಮಲ್ಲಿಕಾರ್ಜುನ ವಿಭೂತಿ, ಚಂದ್ರಶೇಖರ ಪಾಟೀಲ್, ಎಂ. ವೀರಭದ್ರಯ್ಯ ಸ್ವಾಮಿ, ಅ. ಮಲ್ಲಿಕಾರ್ಜುನ ನಡುವಮನಿ, ತಿಮ್ಮಯ್ಯ ಕವಿ, ಸತೀಶ್ ಕುಮಾರ, ವೆಂಕಟಯ್ಯಶೆಟ್ಟಿ ಹೊಸಪೇಟೆ ಹಾಗೂ ಕನ್ನಡ ಮಿತ್ರ ಕೂಟದ ಬಶೀರ ಅಹ್ಮದ ಹೊಸಮನಿ, ಅಶೋಕಕುಮಾರ ಸಿ.ಕೆ. ಜೈನ್, ರಫೀಕ್ ಅಹ್ಮದ್, ರಾಮಲಿಂಗಪ್ಪ ಕುನ್ನೆ, ರಾಮಣ್ಣ ಮ್ಯಾದಾರ, ಲಕ್ಷ್ಮಣ ಕುಮಾರ ಗು., ಅ. ಮಲ್ಲಿಕಾರ್ಜುನ ನಡುವಮನಿ, ಚಂದ್ರಶೇಖರ ಪಾಟೀಲ್, ನಿಜಾಮುದ್ದೀನ್, ರುದ್ರಯ್ಯ ಗುಣ್ಣಾರಿ, ಸತೀಶ್ ಕುಮಾರ, ಇಮಾಮುದ್ದೀನ್ ಮಾಡಗಿರಿ, ರಾಮಣ್ಣ ಎನ್. ಬೋಯೋರ್, ಎಸ್. ಹನುಮಂತಪ್ಪ, ರಮೇಶ್ ಕಲ್ಲುಕರ, ಪಿ. ಚಂದ್ರಶೇಖರ್, ಮಹೇಂದ್ರಸಿಂಗ್, ವೀರೇಶಬಾಬು, ಎಂ. ವೀರಭದ್ರಯ್ಯ ಸ್ವಾಮಿ, ವೆಂಕಟಯ್ಯಶೆಟ್ಟಿ ಹೊಸಪೇಟೆ, ಬಾಬು ಹಾಗೂ ಕ್ಷೀರಲಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.

projectededore

Recent Posts

ಸಿರವಾರದಲ್ಲಿ IIFL ಫೈನಾನ್ಸ್‌ನ 300ನೇ ಶಾಖೆ ಉದ್ಘಾಟನೆನೀಲಗಲ್ ಶ್ರೀಗಳಿಂದ ಚಾಲನೆ

ಸಿರವಾರ: ಬ್ಯಾಂಕಿಂಗ್ ಅಲ್ಲದ ಪ್ರಮುಖ ಹಣಕಾಸು ಸಂಸ್ಥೆ (NBFC) IIFL ಫೈನಾನ್ಸ್, ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನೂತನ ಚಿನ್ನದ…

3 hours ago

ನೂತನ ಎಕ್ಸಪ್ರೆಸ್ ಬಸ್ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಎನ್.ಎಸ್.ಬೋಸರಾಜು

ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ನೂತನ ಎಕ್ಸಪ್ರೆಸ್ ಬಸ್ ನಿಲ್ದಾಣ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಪರಿಶೀಲಿಸಿ…

4 hours ago

​ಡಾ.ಬಿ.ಆರ್. ಅಂಬೇಡ್ಕರ್ ಅವರ ನಿರಂತರ ಓದಿನ ಹಾದಿಯೇ ವಿದ್ಯಾರ್ಥಿಗಳಿಗೆ ಸ್ಪೂರ್ತಿ: ಅಬ್ರಾಹಂ

​ಸಿರವಾರ: 64 ವಿಷಯಗಳಲ್ಲಿ ಪಾಂಡಿತ್ಯ ಹಾಗೂ ಅಗಾಧ ಜ್ಞಾನ ಹೊಂದಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು…

8 hours ago

ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ‘ರಾಶಿ’ ಚಿತ್ರತಂಡ ಭೇಟಿ

ರಾಯಚೂರು: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬಳಿಕ ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ನಟ ಆದಿತ್ಯ…

8 hours ago

ಮಂತ್ರಾಲಯದಲ್ಲಿ ರಾಘವ ಸರೋವರ ಯೋಜನೆಗೆ ಭೂಮಿಪೂಜೆ

25 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಯೋಜನೆ – ₹25 ಲಕ್ಷ ದೇಣಿಗೆ ನೀಡಿದ ಬೆಂಗಳೂರಿನ ಮದನ್ ಪಾಟೀಲ್ ಮಂತ್ರಾಲಯ:…

11 hours ago

ಗ್ರಾಮೀಣ ಜನರಿಗೆ ನಿರಂತರ ಆರೋಗ್ಯ ಸೇವೆ: ಭವಿಷ್ಯ ಭಾರತ್, VST ಸಂಜೀವನಿ ಕಾರ್ಯ ಶ್ಲಾಘನೆ

ರಾಯಚೂರು: ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಭವಿಷ್ಯ ಭಾರತ್ ಸಂಸ್ಥೆ ಹಾಗೂ VST ಸಂಜೀವನಿ ವತಿಯಿಂದ ನ.3ರಂದು VST ಫೌಂಡೇಶನ್ ಡೇ-2026…

1 day ago