Blog

​ಡಾ.ಬಿ.ಆರ್. ಅಂಬೇಡ್ಕರ್ ಅವರ ನಿರಂತರ ಓದಿನ ಹಾದಿಯೇ ವಿದ್ಯಾರ್ಥಿಗಳಿಗೆ ಸ್ಪೂರ್ತಿ: ಅಬ್ರಾಹಂ

​ಸಿರವಾರ: 64 ವಿಷಯಗಳಲ್ಲಿ ಪಾಂಡಿತ್ಯ ಹಾಗೂ ಅಗಾಧ ಜ್ಞಾನ ಹೊಂದಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಹೋರಾಟದ ಹಾದಿ ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು” ಎಂದು ಎಂ.ಆರ್.ಎಚ್.ಎಸ್. ಜಿಲ್ಲಾಧ್ಯಕ್ಷ ಅಬ್ರಾಹಂ ಹೊನ್ನಟಗಿ ಕರೆ ನೀಡಿದರು.

​ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು’ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಸ್ಥರಾಗಿ ಮಾತನಾಡುತ್ತಾ ಅವರು ಈ ಮಾತುಗಳನ್ನಾಡಿದರು.

​ಅಂಬೇಡ್ಕರ್ ಅವರ ಕೊಡುಗೆಗಳು ಸ್ಮರಣೀಯ:
​ಮುಂದುವರಿದು ಮಾತನಾಡಿದ ಅವರು, “ಸಂವಿಧಾನ ರಚನೆಯ ಕಠಿಣ ಹಾದಿಯಲ್ಲಿ ಎದುರಾದ ಹತ್ತು ಹಲವು ಅವಮಾನಗಳನ್ನು ಮೆಟ್ಟಿನಿಂತು, ವಿಶ್ವದ ವಿವಿಧ ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಸರ್ವಶ್ರೇಷಷ್ಠ ಸಂವಿಧಾನವನ್ನು ಅವರು ನೀಡಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ, ಸಾರ್ವತ್ರಿಕ ಮತದಾನದ ಹಕ್ಕು, ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅನುಮತಿ ಹಾಗೂ ಕಾರ್ಮಿಕರಿಗೆ 8 ಗಂಟೆಗಳ ದುಡಿಮೆಯ ಕಾನೂನು ತಂದ ಮಹಾನ್ ಚೇತನ ಡಾ. ಅಂಬೇಡ್ಕರ್” ಎಂದು ಸ್ಮರಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಹನುಮಂತ ಚನ್ನೂರು, “ವಿದ್ಯಾರ್ಥಿಗಳು ಜಾತಿ, ಮತ ಹಾಗೂ ಪಂಥಗಳ ಸಂಕೋಲೆಯಿಂದ ಹೊರಬಂದು, ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಮತ್ತು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು” ಎಂದು ಕಿವಿಮಾತು ಹೇಳಿದರು.

​ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕಗಳನ್ನು ವಿತರಿಸಿ ಗೌರವಿಸಲಾಯಿತು.

​ ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಅಜಿತ್ ಕುಮಾರ್ ಹೊನ್ನಟಗಿ, ಪತ್ರಕರ್ತರ ಸಂಘದ ಅಧ್ಯಕ್ಷ ಸಿ ಹನುಮೇಶ, ಇಸ್ಮಾಯಿಲ್, ಚನ್ನಬಸವ ಹಾಗೂ ಕಾಲೇಜಿನ ಉಪನ್ಯಾಸಕರಾದ ಜಯಪ್ಪ, ಯಾಸೀನ್, ಚನ್ನೂರು ಚನ್ನಪ್ಪ, ಸೂರಿ ದುರುಗಣ್ಣ ನಾಯಕ, ಗಣ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


​

projectededore

Recent Posts

ಸಿರವಾರದಲ್ಲಿ IIFL ಫೈನಾನ್ಸ್‌ನ 300ನೇ ಶಾಖೆ ಉದ್ಘಾಟನೆನೀಲಗಲ್ ಶ್ರೀಗಳಿಂದ ಚಾಲನೆ

ಸಿರವಾರ: ಬ್ಯಾಂಕಿಂಗ್ ಅಲ್ಲದ ಪ್ರಮುಖ ಹಣಕಾಸು ಸಂಸ್ಥೆ (NBFC) IIFL ಫೈನಾನ್ಸ್, ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನೂತನ ಚಿನ್ನದ…

4 hours ago

ನೂತನ ಎಕ್ಸಪ್ರೆಸ್ ಬಸ್ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಎನ್.ಎಸ್.ಬೋಸರಾಜು

ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ನೂತನ ಎಕ್ಸಪ್ರೆಸ್ ಬಸ್ ನಿಲ್ದಾಣ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಪರಿಶೀಲಿಸಿ…

5 hours ago

ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ‘ರಾಶಿ’ ಚಿತ್ರತಂಡ ಭೇಟಿ

ರಾಯಚೂರು: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬಳಿಕ ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ನಟ ಆದಿತ್ಯ…

9 hours ago

ಮಂತ್ರಾಲಯದಲ್ಲಿ ರಾಘವ ಸರೋವರ ಯೋಜನೆಗೆ ಭೂಮಿಪೂಜೆ

25 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಯೋಜನೆ – ₹25 ಲಕ್ಷ ದೇಣಿಗೆ ನೀಡಿದ ಬೆಂಗಳೂರಿನ ಮದನ್ ಪಾಟೀಲ್ ಮಂತ್ರಾಲಯ:…

12 hours ago

ಗ್ರಾಮೀಣ ಜನರಿಗೆ ನಿರಂತರ ಆರೋಗ್ಯ ಸೇವೆ: ಭವಿಷ್ಯ ಭಾರತ್, VST ಸಂಜೀವನಿ ಕಾರ್ಯ ಶ್ಲಾಘನೆ

ರಾಯಚೂರು: ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಭವಿಷ್ಯ ಭಾರತ್ ಸಂಸ್ಥೆ ಹಾಗೂ VST ಸಂಜೀವನಿ ವತಿಯಿಂದ ನ.3ರಂದು VST ಫೌಂಡೇಶನ್ ಡೇ-2026…

1 day ago

ಪುರಸಭೆಯ ಕುಡಿಯುವ ನೀರಿನ ಕೆರೆ ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್.ಬೋಸರಾಜು

ಮಾನ್ವಿ : ತಾಲೂಕಿನ ರಬ್ಬಣಕಲ್ ಗ್ರಾಮದ ಬಳಿಯಲ್ಲಿನ ಪುರಸಭೆಯ ಕುಡಿಯುವ ನೀರಿನ ಕೆರೆಗೆ ವಿಧಾನ ಪರಿಷತ್ ಸದಸ್ಯ ಎನ್. ಎಸ್…

1 day ago