ಸಿರವಾರ: ಬ್ಯಾಂಕಿಂಗ್ ಅಲ್ಲದ ಪ್ರಮುಖ ಹಣಕಾಸು ಸಂಸ್ಥೆ (NBFC) IIFL ಫೈನಾನ್ಸ್, ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನೂತನ ಚಿನ್ನದ ಸಾಲದ ಶಾಖೆಯನ್ನು ಉದ್ಘಾಟಿಸಿದೆ. ಇದು ಕರ್ನಾಟಕದಲ್ಲಿ ಸಂಸ್ಥೆಯ 300ನೇ ಶಾಖೆಯಾಗಿದ್ದು, ರಾಜ್ಯದಲ್ಲಿ ಸಂಸ್ಥೆಯ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದೆ.
ಶ್ರೀ ಕ್ಷೇತ್ರ ನೀಲಗಲ್ ಮತ್ತು ಎನ್. ಗಣೇಕಲ್ ಬೃಹನ್ಮಠದ ಪರಮ ಪೂಜ್ಯ ಶ್ರೀ ಷ. ಬ್ರ. ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಶಾಖೆಗೆ ಚಾಲನೆ ನೀಡಿದರು. ಸಂಸ್ಥೆಯು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಿ ಎಂದು ಅವರು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕ ವಾಹಿದ್ ಷರೀಫ್, ವಲಯ ವ್ಯವಸ್ಥಾಪಕ ಶರಣಪ್ಪ, ಶಾಖಾ ವ್ಯವಸ್ಥಾಪಕ ವಿಶ್ವಮೂರ್ತಿ ಮಳೆಗೌಡ್ರು ಲಕ್ಕoದಿನ್ನಿ, ಕಟ್ಟಡ ಮಾಲೀಕರಾದ ಜೆ. ರಾಜಶೇಖರಪ್ಪ ಗೌಡ ಮತ್ತು ನರಸನಗೌಡ ಸಿರವಾರ, ಸಿಬ್ಬಂದಿಗಳಾದ ಮಂಜುನಾಥ ಸ್ವಾಮಿ,ಅರ್ಜುನ್, ಮೊಹಮ್ಮದ್ ರಫಿ, ಮಾರುತಿ, ಅನುಷಾ, ಶ್ವೇತಾ ಹಾಗೂ ಪಟ್ಟಣದ ಗಣ್ಯರು, ಮುಖಂಡರು, ಸ್ಥಳೀಯ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಶಾಖೆಯ ಪ್ರಮುಖ ಸೌಲಭ್ಯಗಳು:
ಮಹಿಳಾ ಚಿನ್ನದ ಸಾಲ: ಮಹಿಳಾ ಉದ್ಯಮಿಗಳು ಮತ್ತು ಗೃಹಿಣಿಯರಿಗೆ ಶೂನ್ಯ ಸಂಸ್ಕರಣಾ ಶುಲ್ಕ ಹಾಗೂ ಆಕರ್ಷಕ ಬಡ್ಡಿದರ
ಸುವರ್ಣ ಧಾರಾ ತ್ವರಿತ ಸಾಲ: ₹50 ಲಕ್ಷದವರೆಗೆ ಡಿಜಿಟಲ್ ಪ್ರಕ್ರಿಯೆಯ ಮೂಲಕ ಸಾಲ
ಭದ್ರತೆ ಮತ್ತು ತ್ವರಿತ ವಿತರಣೆ: ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ; ಕೆಲವೇ ನಿಮಿಷಗಳಲ್ಲಿ ಸಾಲದ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ
ಕನಿಷ್ಠ ದಾಖಲಾತಿ: ಆದಾಯ ಪುರಾವೆ ಬೇಡ; ಆಧಾರ್/ಪ್ಯಾನ್ ಸೇರಿದಂತೆ ಕನಿಷ್ಠ KYC ಸಾಕು
ಸಂಸ್ಥೆಯ ಅಧಿಕಾರಿಗಳು ಮಾತನಾಡಿ, ರಾಯಚೂರು ಜಿಲ್ಲೆಯ ಸಿರವಾರದಲ್ಲಿ 300ನೇ ಶಾಖೆ ತೆರೆದಿರುವುದು ಹೆಮ್ಮೆಯ ವಿಷಯ ಎಂದರು. ಈ ಶಾಖೆಯು ಸುತ್ತಮುತ್ತಲಿನ ಸಣ್ಣ ವ್ಯಾಪಾರಿಗಳು, ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯ ಸಮಯದಲ್ಲಿ ಆರ್ಥಿಕ ನೆರವು ನೀಡಿ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.








