ಸಿರವಾರ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಸಿರವಾರ: ಪಟ್ಟಣದ ಸಮುದಾಯ ಭವನದಲ್ಲಿ ಮಡಿವಾಳ ಮಾಚಿದೇವ ಸಮಾಜದ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಸಭೆಯಲ್ಲಿ ಸರ್ವಾನುಮತದಿಂದ ಗೌರವಾಧ್ಯಕ್ಷರಾಗಿ ಹುಲಿಗೆಪ್ಪ ಮಡಿವಾಳ ಕೆ.ಆರ್.ಎಸ್, ಅಧ್ಯಕ್ಷರಾಗಿ ಹುಲಿಗೆಪ್ಪ ಮಡಿವಾಳ ನಾಗಡದಿನ್ನಿ, ಉಪಾಧ್ಯಕ್ಷರಾಗಿ ದುರುಗಣ್ಣ ಮತ್ತು ಮಲ್ಲಿಕಾರ್ಜುನ್, ಕಾರ್ಯಾಧ್ಯಕ್ಷರಾಗಿ ಮೌನೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ, ಕಾರ್ಯದರ್ಶಿಗಳಾಗಿ ಪ್ರವೀಣ್, ಬಸವ, ಅನಂತರಡ್ಡಿ, ಖಜಾಂಚಿಗಳಾಗಿ ಅನಿಲ್ ಕುಮಾರ್, ಮಲ್ಲಿಕಾರ್ಜುನ್ ಅಮರಪ್ಪ, ಲೆಕ್ಕ ಪರಿಶೋಧಕರಾಗಿ ರಘು ಮಡಿವಾಳ, ಪ್ರಕಾಶ್ ಕಾರ್ಪೆಂಟರ್ ಮತ್ತು ದೇವಸ್ಥಾನದ ಪೂಜಾರಿಯಾಗಿ ಮಲ್ಲಿಕಾರ್ಜುನ್ ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಬಿ.ಶರಣಪ್ಪ ಮಡಿವಾಳ, ಸಂಘದ ಉದ್ದೇಶದ ಬಗ್ಗೆ ವಿವರಿಸಿ, ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನೂತನ ಗೌರವಾಧ್ಯಕ್ಷ ಹುಲಿಗೆಪ್ಪ ಕೆ.ಆರ್.ಎಸ್ ಮತ್ತು ಅಧ್ಯಕ್ಷ ಹುಲಿಗೆಪ್ಪ ನಾಗಡದಿನ್ನಿ ಸಮಾಜದ ಸಂಘಟನೆ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಬೂದೆಪ್ಪ ಮಡಿವಾಳ, ನಾಗಪ್ಪ ಮಡಿವಾಳ, ಬಸವರಾಜ್ ಮಡಿವಾಳ, ಹುಲಿಗೆಪ್ಪ ಮಡಿವಾಳ, ರಾಜು ಮಡಿವಾಳ, ಶಿವಶರಣ ಮಡಿವಾಳ ಮಲ್ಲಯ್ಯ ಮಡಿವಾಳ, ಮೌನೇಶ್, ಹನುಮಂತ, ಬಸವ, ಅನಿಲ್ ಕರೆಗುಡ್ಡ, ಈರಪ್ಪ, ಆನಂದ್ ಮಡಿವಾಳ ಸೇರಿದಂತೆ ಸಮಾಜದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

Previous articleಇಂದಿರಾ ನಗರ ಜ್ಞಾನ ವಿಕಾಸ ಕೇಂದ್ರದಲ್ಲಿ ‘ಹೊಸ ರುಚಿ’ ಪ್ರಾತ್ಯಕ್ಷಿಕೆ
Next articleಸೆ.7ಕ್ಕೆ ಯರಮರಸನ ಗುಡ್ಡದ ಬಸವೇಶ್ವರ ಜಾತ್ರಾ ಮಹೋತ್ಸವ