ಸಿರವಾರ: ಡಾಕ್ಟರ್, ಇಂಜಿನಿಯರ್ ಹಾಗೂ ವಕೀಲರ ಸಾಲಿನಲ್ಲಿ ಈಗ ಶಿಕ್ಷಕರಿಗೂ ವಿಶೇಷ ಗೌರವ ಸಿಕ್ಕಂತಾಗಿದೆ. ರಾಜ್ಯದ ಕೋಟಿ ಕೋಟಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ, ಅವರ ಹೆಸರಿನ ಮುಂದೆ ಗೌರವ ಸೂಚಕವಾಗಿ ‘Tr’ (Teacher) ಎಂದು ಬಳಸಿಕೊಳ್ಳಲು ಅಧಿಕೃತ ಅನುಮತಿ ನೀಡಿದೆ.
ಸರ್ಕಾರದ ನಡವಳಿಯಲ್ಲೇನಿದೆ?
ನಾಡು ಹಾಗೂ ಸಮಾಜದ ಸರ್ವತೋಮುಖ ಪ್ರಗತಿಯಲ್ಲಿ ಶಿಕ್ಷಕರ ಶ್ರಮ ಅತ್ಯಂತ ಅನನ್ಯವಾದದ್ದು. ವಿದ್ಯಾರ್ಥಿಗಳಲ್ಲಿ ಜ್ಞಾನ, ವೈಜ್ಞಾನಿಕ ಮನೋಭಾವ, ಶಿಸ್ತು, ಪ್ರಾಮಾಣಿಕತೆ ಹಾಗೂ ಸಂಸ್ಕಾರದಂತಹ ಮಾನವೀಯ ಮೌಲ್ಯಗಳನ್ನು ಬಿತ್ತಿ, ಸನ್ಮಾರ್ಗದಲ್ಲಿ ನಡೆಸುವ ಜವಾಬ್ದಾರಿಯನ್ನು ಶಿಕ್ಷಕರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ದೇಶದ ಗಡಿ ಕಾಯುವ ಯೋಧನಿಂದ ಹಿಡಿದು ಸಮಾಜ ಕಾಯುವ ಅಧಿಕಾರಿ, ವೈದ್ಯ, ಇಂಜಿನಿಯರ್ ಮತ್ತು ರೈತರನ್ನು ರೂಪಿಸುವ ನಿಜವಾದ ಶಿಲ್ಪಿ ಎಂದರೆ ಅದು ಶಿಕ್ಷಕ ಮಾತ್ರ.
ಶಿಕ್ಷಕರ ಈ ನಿರಂತರ ಸೇವೆಯನ್ನು ಪರಿಗಣಿಸಿ, ಗೌರವದ ಸಂಕೇತವಾಗಿ ಹೆಸರಿನ ಪೂರ್ವಪ್ರತ್ಯಯವಾಗಿ ‘Tr’ ಎಂದು ಬಳಸಲು ಸರ್ಕಾರ ಹಸಿರು ನಿಶಾನೆ ತೋರಿದೆ. ಇದು ಕೇವಲ ಎರಡಕ್ಷರದ ಶೀರ್ಷಿಕೆಯಷ್ಟೇ ಅಲ್ಲ, ಶಿಕ್ಷಕರ ಜೀವಮಾನದ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಸರ್ಕಾರಿ ಪ್ರಕಟಣೆ ಬಣ್ಣಿಸಿದೆ.
ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ:
ಸರ್ಕಾರದ ಈ ನಿರ್ಧಾರವನ್ನು ಸಿರವಾರ ತಾಲೂಕಿನ ಶಿಕ್ಷಕ ವೃಂದ ಮುಕ್ತಕಂಠದಿಂದ ಸ್ವಾಗತಿಸಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಶಿಕ್ಷಕ ಚನ್ನವೀರಯ್ಯ ಹೊಸಮಠ, “ಉನ್ನತ ಶಿಕ್ಷಣ ಪಡೆದಿದ್ದರೂ ನಮಗೆ ಹೆಸರಿನ ಮುಂದೆ ಬಳಸಲು ಯಾವುದೇ ಗೌರವಪೂರ್ವಕ ಲಾಂಛನವಿರಲಿಲ್ಲ. ಇನ್ಮುಂದೆ ನಾವೂ ಸಹ ಹೆಮ್ಮೆಯಿಂದ ‘Tr’ ಎಂದು ಬಳಸಿಕೊಳ್ಳಬಹುದು. ಈ ಮೂಲಕ ಶಿಕ್ಷಕ ವೃತ್ತಿಗೆ ಸೂಕ್ತ ಗೌರವ ತಂದುಕೊಟ್ಟ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನಮ್ಮ ಕೃತಜ್ಞತೆಗಳು” ಎಂದು ತಿಳಿಸಿದ್ದಾರೆ.
ಲೇಖಕರು - ಶ್ರೀಮತಿ ಡಿ. ಕೋಮಲ, ರಾಯಚೂರು ಗುರುಶ್ರೀ ವಿ. ಎಸ್. ಕಾಂತನವರ ಅವರು ಕನ್ನಡ ಮತ್ತು ಹಿಂದಿ ಎರಡೂ…
ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದಲ್ಲಿ ಪ್ರಗತಿಯಲ್ಲಿರುವ ವಿವಿಧ ಪ್ರಮುಖ ಅಭಿವೃದ್ಧಿ…
ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಮಟಮಾರಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮ್ಯಾಕ್ರೋ ಯೋಜನೆಯಡಿ ₹3…
ಸಿರವಾರ: ಸಚಿವ ಸತೀಶ ಜಾರಕಿಹೊಳಿ ಅವರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ED ದಾಳಿ ನಡೆಸಿದೆ ಎಂದು ಆರೋಪಿಸಿ,…
ರಾಯಚೂರು: ನಗರದ ಪೋತಗಲ್ ರಸ್ತೆಯ ಮನೆಯೊಂದರಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ…
ರಾಯಚೂರು: ನಗರದ ವಾರ್ಡ್ ನಂ.22ರಲ್ಲಿ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಅವರು ಭಾನುವಾರ ಮನೆ-ಮನೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು…